Post

ಸಮಯ ಪ್ರಯಾಣ!

     ನಾವು ಮಲಗಿದ್ದಾಗ ನಮ್ಮ ಮೆದುಳು ಕೆಲಸ ಮಾಡುತ್ತಾಇರುತ್ತದೆ, ಅಂದರೆ ಏನಾದರೂ ಯೋಚಿಸುತ್ತಾ ಇರುತ್ತದೆ. ದಿನಪೂರ್ತಿ ನಡೆದ ಘಟನೆಗಳನ್ನು ಮೆಲುಕುಹಾಕುತ್ತದೆ ಅವುಗಳೇ ಕನಸುಗಳು.

     ನಮಗೆ ಪ್ರತಿದಿನ ಕನಸುಗಳು ಬಿಳುತ್ತಿರುತ್ತವೆ ಆದರೆ ಅವುಗಳನ್ನು ನಾವು ಎಚ್ಚರವಾದಮೆಲೆ ನೆನಪಿರುವುದಿಲ್ಲ, ಆದರೆ ನಮ್ಮ ಮನಸಿನ ಮೇಲೆ ಪ್ರಭಾವ ಬೀರಿದ ಘಟನೆ ಬಗ್ಗೆ ನೋಡಿದ ಕನಸುಗಳು ನೆನಪಿನಲ್ಲಿ ಉಳಿಯುತ್ತವೆ.ಅಂತಹ ಒಂದು ಕನಸಿನ ಜೋಜೆ ನನ್ನದೊಂದು ಕತೆ.

     ನಾನು ಕಾಲೇಜಿನ ಬಿಡುವಿನ ಸಮಯದಲ್ಲಿ ಚಲನಚಿತ್ರಗಳನ್ನು ನೋಡುತ್ತಿದ್ದೆ, ಅದರಲ್ಲಿಯೂ ವೈಜ್ಞಾನಿಕ ವಿಷಯದ ಬಗ್ಗೆ ಇರುವ ಚಲನಚಿತ್ರಗಳನ್ನು ಆಸಕ್ತಿ ಜಾಸ್ತಿ. ಅದರಲ್ಲಿಯೂ ಸಮಯ ಪ್ರಯಾಣದ (ಟೈಮ್ ಟ್ರಾವೆಲ್) ಬಗ್ಗೆ ಇರುವ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದೆ. ಹೀಗೆ ಪ್ರವಾಹದ ಸಂದರ್ಭದಲ್ಲಿ ಎರಡು ವಾರಗಳ ಕಾಲ ರಜೆ ಸಿಕ್ಕಿತ್ತು ಈ ಸಮಯದಲ್ಲಿ ನಾನು ಏಳೆಂಟು ಸಮಯ ಪ್ರಯಾಣದ ಚಲನಚಿತ್ರಗಳನ್ನು ಹುಡುಕಿ ಇಟ್ಟುಕೊಂಡೆ. ನಿರಂತರವಾಗಿ ಎರಡು ಮೂರು ದಿನದಲ್ಲಿ ಈ ಎಲ್ಲಾ ಸಿನಿಮಾಗಳನ್ನು ನೋಡಿ ಮುಗಿಸಿದೆ.

     ಅಂದು ಕನಸಿನಲ್ಲಿ ನಾನು ೨೦೧೯ ರಿಂದ ೨೦೧೬ ಗೆ ಹೋದಂತಾ ಕನಸು ಬಿದ್ದಿತ್ತು. ಆ ಕನಸು ಎಷ್ಟು ಬಲವಾಗಿತ್ತೆಂದರೆ ನಾನು ಕನಸಿನಲ್ಲಿ ೨೦೧೬ ಕೆ ಹೋಗಿರುವುದು ಮತ್ತು ನನಗೆ ನೋಟ್ ಬ್ಯಾನ್ ಮುಂದೆ ಆಗಲಿದೆ ಎಂದು ತಿಳಿದಿದೆ. ಆ ಕನಸು ವಾಸ್ತವಕ್ಕೆ ಎಷ್ಟು ಹತ್ತಿರವಾಗಿತ್ತು ಎಂದರೆ ನಾನು ನಿಜವಾಗಿಯೂ ಸಮಯ ಪ್ರಯಾಣ ಮಾಡಿದ್ದೇನೆಂದು ಕನಸಿನಲ್ಲಿ ಖುಷಿಪಟ್ಟಿದ್ದೆ. ಈ ಕನಸು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಎಚ್ಚರವಾದ ನಂತರವೂ ನನಗೆ ಸಂಪೂರ್ಣ ನೆನಪಿನಲ್ಲಿತ್ತು. ಅದು ಎಷ್ಟರ ಮಟ್ಟಿಗೆ ನೆನಪಿದೆ ಎಂದರೆ ಈಗ ಒಂದು ವರ್ಷದ ನಂತರ ಈ ಲೇಖನವನ್ನು ಬರೆಯುತ್ತಿದ್ದೇನೆ.

     ಈ ಘಟನೆ ನಂತರ ನನಗೆ ನಿರಂತರವಾಗಿ ಟೈಮ್ ಟ್ರಾವೆಲ್ ಸಿನಿಮಾಗಳನ್ನು ನೋಡಿದ ಪರಿಣಾಮ ಎಂದು ತಿಳಿಯಿತು. ನಾವು ಏನು ನೋಡುತ್ತೇವೆ ಏನು ಕೇಳುತ್ತೇವೆ ಇವೆಲ್ಲವೂ ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತವೆ ಆದ್ದರಿಂದ ಅತಿಯಾಗಿ ಏನನ್ನು ಮಾಡಬಾರದು.

     ಎಚ್ಚರವಾದ ಮೇಲೆ ನನಗೆ ಕಾಡಿದೆ ಒಂದು ಪ್ರಶ್ನೆ ಏನೆಂದರೆ ನಾನು ನಿಜವಾಗಿಯೂ ಸಮಯ ಪ್ರಯಾಣ ಮಾಡಿದರೆ ಏನು ಮಾಡುತ್ತಿದ್ದೆ? ನೀವು ಮಾಡಿದರೆ ಏನು ಮಾಡುತೀರಿ ಎಂದು ಯೋಚನೆ ಮಾಡಿ.

ಧನ್ಯವಾದಗಳು
ಲೇಖನ: ಅರುಣ್ ಸಿ ಕಲ್ಲಪ್ಪನವರ್
೨೦೨೦

This post is licensed under CC BY 4.0 by the author.