ಕೋಟಿಜನರ ಊರು
ಕೋಟಿಜನರ ಊರಲ್ಲಿ ಒಂಟಿಯಾಗಿರುವೆ,
ಎಷ್ಟು ಜನ ಈ ಊರಲ್ಲಿ ಯಾರು ನನ್ನೊರು ?
ಸರಿಸಮ ಸಮಯದಲ್ಲಿ ಯಾರಿಗೂ ಸಮಯವಿಲ್ಲ,
ಚಲಿಸುವ ಮೆಟ್ಟಿಲ ಮೇಲೆ ಓಡುವರಲ್ಲ !
ಸ್ವಲ್ಪ ತಪ್ಪಾದರೂ ಯಾವುದು ನಿನ್ನ ಊರು ?
ಕೆಂಪ್ ಬಸ್ ಹತ್ತಿಕೊಂಡು ಎಲ್ಲಿಂದ ಬಂದೋರು?
ನಮ್ಮ ನಾಡಿನಲ್ಲಿ ನಾವು ಉತ್ತರದವರು,
ಮರುಭೂಮಿಯಿಂದ ನಡೆದು ಬಂದವರು.
ಒಳ್ಳೆಯ ವಿಚಾರಗಳು ತುಂಬಾ ಇದೆ ಆದರೆ ಇದು,
ನಕಾರಾತ್ಮಕ ದೃಷ್ಟಿಯಲ್ಲಿ ನಾಕಂಡ ಬೆಂಗಳೂರು.
ಅರುಣ್ ಸಿ ಕಲ್ಲಪ್ಪನವರ್
೧ ೭ -೦ ೩ -೨ ೦ ೨ ೫
This post is licensed under CC BY 4.0 by the author.