ಆತ್ಮೀಯತೆಯ ಭಾವ
ಮನುಶ್ಯ ಸಂಘಜೀವಿ. ಆದಕಾರಣ, ತನ್ನ ಊರು, ತನ್ನ ಜನ ಮತ್ತು ತನ್ನ ಬಳಗವನ್ನು ಪ್ರೀತಿಸುತ್ತಾನೆ; ಒಂದುವೇಳೆ ಒಬ್ಬ ಮನುಶ್ಯ ತನ್ನ ಊರಿಂದ ದೂರವಿದ್ದಾಗ ಆಪ್ರೀತಿ ಇನ್ನು ಹೆಚ್ಚಾಗುತ್ತಗೆ. ಪರ ಊರಲ್ಲಿ ನಮ್ಮ ಊರಿನವರ ಪರಿಚಯವಾದರೆ ಏನೊ ಒಂದು ಖುಷಿ ಮತ್ತು ಆತ್ಮೀಯತೆಯ ಭಾವ ಮೂಡುತ್ತದೆ. ಆದರೆ ಈ ನಮ್ಮೂರು ಮತ್ತು ನಮ್ಮವರು ಎಂಬ ಭಾವ ಎಲ್ಲರಲ್ಲೂ ಸಮನಾಗಿ ಇರುವುದಿಲ್ಲ.
ಬೆಂಗಳೂರಿನಲ್ಲಿ ನಾನು ಎಂ.ಯಸ್.ಸಿ ಕಲಿಯಲು ಬಂದಮೇಲೆ, ನಾನು ಯೂನಿವರ್ಸಿಟಿಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಇರುವ ಒಬ್ಬ ನಮ್ಮೂರಿನವರನ್ನು ಭೇಟಿಯಾಗಲು ಹೋಗಿದ್ದೆ. ಅವರು ನಮ್ಮೂರಿನವರು ಅಷ್ಟೇಅಲ್ಲ ನನ್ನ ತಂದೆಯ ಪರಿಚಯಸ್ಥರಾಗಿದ್ದರು, ನಾನು ಯೂನಿವರ್ಸಿಟಿಯನ್ನು ಸೇರುತ್ತಿರುವ ವಿಷಯ ಹೇಳಿದರಾಯಿತು ಎಂದು ಹೋದೆನು. ಅಂದು ನಾನು ಅವರಿಗೆ ನನ್ನ ಪರಿಚಯ ನನ್ನ ಊರು ಮತ್ತು ತಂದೆಯ ಪರಿಚಯಹೇಳಿದಮೇಲೆ ನನ್ನ ನಿರೀಕ್ಷೆ ಏನೋಇತ್ತು, ಆದರೆ ಅವರ ಪ್ರತಿಕ್ರಿಯೆ ‘ಓ ಹೌದಾ ಈ ಕೋರ್ಸ್ ನಮ್ ಯೂನಿವೆರ್ಸಿಟಿಯಲ್ಲಿ ಇದೆಯಾ? ಸರಿ’ ನನಗೆ ಹೊರಬಂದಮೇಲೆ ಅನಿಸಿದ್ದು ಇಷ್ಟೇ ನಾನು ಅವರ ಸ್ಥಾನದಲ್ಲಿ ನಿಂತು ನೋಡಿದಾಗ ಯಾರಾದರೂ ನಮ್ಮೂರವರು ಹೀಗೆ ಭೇಟಿಯಾದರೆ ನಾನು ಇಷ್ಟು ಸಹಜವಾಗಿ ವರ್ತಿಸುತ್ತಿರಲಿಲ್ಲ, ಕನಿಷ್ಠ ಒಂದೆರೆಡು ಭರವಸೆ ಮಾತು ಅಥವಾ ಪ್ರೋತ್ಸಾಹದ ಮಾತನಾಡುತ್ತಿದ್ದೆ.
ಕೊನೆಯದಾಗಿ ನನಗೆ ಅನ್ನಿಸಿದ್ದು ಇಷ್ಟೇ ಆತ್ಮೀಯತೆಯ ಭಾವ ಎಲ್ಲರಲ್ಲೂ ಇರುವುದಿಲ್ಲ.