೧. ಯಾರು ಕನ್ನಡ?
ಮನದಲಿ ಮಾತಾಡೋ ಮಾತು ಕನ್ನಡ.
ನಿದ್ದೆಯಲಿ ಕನವರಿಸೋ ಪದಗಳು ಕನ್ನಡ.
ಸುಪ್ತ ಮನಸಿನ ಕನಸು ಕನ್ನಡ.
ಮೆದುಳ ಯೋಚನೆಯ ಮಾಧ್ಯಮ ಕನ್ನಡ.
ಆಡಿದ ಮೊದಲ ಮಾತು ಕನ್ನಡ.
ಗುಂಗು ಹಿಡಿಯುವ ಗೀತೆ ಕನ್ನಡ.
ಆಯ್ಕೆಗಳಲ್ಲಿ ನಮ್ಮ ಆಧ್ಯತೆ ಕನ್ನಡ.
ತುರ್ತಿನಲಿ ಗೀಚುವ ಅಕ್ಷರ ಕನ್ನಡ.
ನಡೆ, ನುಡಿ, ವಿಚಾರ, ವ್ಯವಹಾರ, ಎಲ್ಲವೂ ಕನ್ನಡ.
ಭಾಷೆ, ಸಂಸ್ಕೃತಿ, ಗೌರವಿಸುವ ಎಲ್ಲರೂ ಕನ್ನಡ.
ನಾನು ಕನ್ನಡ. ನಾನೇ ಕನ್ನಡ.
ನಾವು ಕನ್ನಡ. ನಾವೇ ಕನ್ನಡ.
-ಅರುಣ ಸಿ ಕಲ್ಲಪ್ಪನವರ
ಕರ್ನಾಟಕ ರಾಜ್ಯೋತ್ಸವ -೨೦೨೪