ಅಂಚು

ಕನ್ನಡ ಅಕ್ಷರ ಶೈಲಿ

ಅಂಚು ಫಾಂಟ್‌ನ ವಿನ್ಯಾಸವು ಡಿಸ್ಪ್ಲೇ ಪಿಕ್ಸೆಲ್‌ಗಳಿಂದ ಪ್ರೇರಿತವಾಗಿದೆ. ಇದು ಅಂಚು ಅಂಚಾದ, ಕಟ್ಟು ನಿಟ್ಟಿನ ನೋಟವನ್ನು ನೀಡುತ್ತದೆ. ಅಂಚು ಡಿಜಿಟಲ್ ವಿನ್ಯಾಸಗಳಲ್ಲಿ ಬಳಸಲು ಪರಿಪೂರ್ಣವಾಗಿದೆ. ಆಧುನಿಕ , ತಂತ್ರಜ್ಞಾನ , ಪಿಕ್ಸೆಲ್ ಪರ್ಫೆಕ್ಟ್ ಮತ್ತು ಚೌಕದ ಭಾವನೆಯನ್ನು ಸ್ಥಾಪಿಸುತ್ತದೆ. ಈ ಫಾಂಟ್ನಲ್ಲಿ ಲಂಬಕೋನ (right angle 90°) ಮಾತ್ರ ಬಳಸಲಾಗಿದೆ.
ಕನ್ನಡಿಗನಾದ ನಾನು ಅಂಚು ಫಾಂಟ್ ಅನ್ನು ರಚಿಸಿ ಓಪನ್ ಸೋರ್ಸ್ ಸಾಫ್ಟ್‌ವೇರ್ ಆಗಿ ಲಭ್ಯವಾಗುವಂತೆ ಮಾಡಿದ್ದೆನೆ. ಅಂದರೆ ಇದು ಸಂಪೂರ್ಣ ಉಚಿತ(ಮುಕ್ತ) ಬಳಕೆಯಾಗಿರುತ್ತದೆ. ಕನ್ನಡ ಭಾಷೆಗಾಗಿ ಇದು ನನ್ನ ಅಳಿಲು ಸೇವೆ.
ಅಂಚು ಫಾಂಟ್ ನಿಮಗೆ ಉಪಯುಕ್ತವಾಗಿದೆ ಮತ್ತು ಅದ್ಭುತ ವಿನ್ಯಾಸಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಅಂಚು ಬಳಸಿ ರಚಿಸಿದ ವಿನ್ಯಾಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಟ್ಯಾಗ್ ಮಾಡಿ.
-ಅರುಣ ಸಿ ಕಲ್ಲಪ್ಪನವರ

ಅಂಚು ಫಾಂಟ್ ಬಗ್ಗೆ

ಬಾರಿಸು ಕನ್ನಡ ಡಿಂಡಿಮವ.

ಬಾರಿಸು ಕನ್ನಡ ಡಿಂಡಿಮವ.

ಬಾರಿಸು ಕನ್ನಡ ಡಿಂಡಿಮವ.

ಬಾರಿಸು ಕನ್ನಡ ಡಿಂಡಿಮವ.